Wednesday, October 22, 2008

ಸರ್ಟಿಫಿಕೇಟ್ ಕೋರ್ಸುಗಳು ಭಾರತದಲ್ಲಿ ಆರಂಭ

Source: http://thatskannada.oneindia.in/news/2008/10/20/cisco-gtap-launched-in-india.html

ಬೆಂಗಳೂರು, ಅ. 20 :
ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳಲ್ಲೊಂದಾದ ಸಿಸ್ಕೋ 'ಗ್ಲೋಬಲ್ ಟ್ಯಾಲೆಂಟ್ ಎಕ್ಸಿಲರೇಶನ್ ಪ್ರೋಗ್ರಾಮ್'(GTAP) ಎಂಬ ಹೆಸರಿನಡಿಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಭಾರತದಲ್ಲಿ ಆರಂಭಿಸಿದೆ. ಈ ಕೋರ್ಸುಗಳು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ಹಾಗೂ ಜೋರ್ಡಾನಿನ ಅಮಾನ್ ನಲ್ಲಿ ಈಗಾಗಲೇ ನಡೆಯುತ್ತಿವೆ.

ಸಿಸ್ಕೋ ಕಂಪನಿಯಲ್ಲಿ ಈಗಾಗಲೇ 4500 ಸಾವಿರಕ್ಕಿಂತ ಅಧಿಕ ವೃತ್ತಿಪರ ಇಂಜನಿಯರ್ ಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಕಂಪನಿಯ ಉದ್ಯೋಗಿಗಳ ಗುಣಮಟ್ಟ ಹೆಚ್ಚಿಸಲು ಸುಮಾರು 17 ಸಿಸಿಐಇ(cisco Certified Internetwork experts)ಗಳು ಕೆಲಸ ನಿರ್ವಹಿಸುತ್ತಿವೆ. ಇದೀಗ ಇದನ್ನು ಕಂಪನಿಯೇತರ ಉದ್ಯೋಗಿಗಳಿಗೂ ಮುಕ್ತವಾಗಿರಸಲು ನಿರ್ಧರಿಸಲಾಗಿದೆ ಎಂದು ಈ ಕಂಪನಿಯ ಎಚ್ ಆರ್ ವಿಭಾಗದ ಉಪಾಧ್ಯಕ್ಷ ಲಿಯೋ ಸ್ಕ್ರೀವ್ ನರ್ ಹೇಳಿದ್ದಾರೆ. ಇಂಜನಿಯರಿಂಗ್ ಪದವಿಗಳನ್ನು ಮುಗಿಸಿಕೊಂಡು ಬರುವ ಹೊಸ ವಿದ್ಯಾರ್ಥಿಗಳು ಹಾಗೂ ಈಗಾಗಲೇ ಕೆಲಸ ನಿರ್ವಹಿಸುತ್ತಿರುವ ಇಂಜನಿಯರ್ ಗಳು ಸರ್ಟಿಫಿಕೇಟ್ ಕೋರ್ಸಿನ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಅವರು ವಿವರಿಸಿದರು.

ಸಿಸ್ಕೋ ಕಂಪನಿಯು ಮುಂದಿನ 3 ರಿಂದ 5 ವರ್ಷಗಳ ಅವಧಿಯಲ್ಲಿ ಕಂಪನಿಯ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಚಿಂತನೆ ನಡೆಸಿದೆ. ಈ ಮೂಲಕ CCIE ಗಳನ್ನು ಕೂಡಾ ಹೆಚ್ಚಿಸಲು ನಿರ್ಧರಿಸಲಾಗಿದೆ. GTAP ಒಟ್ಟು 37 ವಾರಗಳು ತರಬೇತಿ ಕಾರ್ಯಕ್ರಮವಾಗಿದೆ. ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ನೈಪುಣ್ಯತೆ, ಕಂಬೈನ್ಡ್ ಕ್ಲಾಸ್ ರೂಮ್ ಟ್ರೇನಿಂಗ್, ಇಂಡಸ್ಟ್ರೀಸ್ ಇಂಟರ್ಯಾಕ್ಷನ್, ವರ್ಕ್ ಎಕ್ಸ್ ಪೀರಿಯನ್ಸ್ ಮತ್ತಿತರ ಅಗತ್ಯ ಮಾಹಿತಿಗಳನ್ನು ಹೇಳಿಕೊಡಲಾಗುವುದು ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿರುವ ಸಿಸ್ಕೋ ಕಂಪನಿಯಲ್ಲಿ ಮೊದಲನೇ ತರಬೇತಿ ಕಾರ್ಯಕ್ರಮ ಶೀಘ್ರದಲ್ಲಿ ಆರಂಭವಾಗಲಿದೆ. ಇದಕ್ಕಾಗಿ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಒಟ್ಟು 130 ವೃತ್ತಿಪರರನ್ನು GTAP ಕಕ್ಷೆಯಲ್ಲಿ ಸಿದ್ಧಗೊಳಿಸುವ ಯೋಜನೆಯನ್ನು ಸಿಸ್ಕೋ ಹಾಕಿಕೊಂಡಿದೆ.

No comments: